ಮುಂಜಾನೆ ಮಂಜಲ್ಲಿ

ಜಸ್ಟ್ ಮಾತ್ ಮಾತಲ್ಲಿ

ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ

ಓ ಒಲವೇ ನೀನೆಲ್ಲಿ ಹುಡುಕಾಟ ನಿನಗಿನ್ನೆಲ್ಲಿ

ನನ್ನೆದೆಯೊಳಗೆ ನೀನಿಳಿದು

ಜಡ ಮನದಾ ಮೌನ ಮುರಿದು

ಬಿಸಿಯುಸಿರನ್ನು ನೀ ಬಗೆದು

ನಿಟ್ಟುಸಿರನ್ನು ನೀ ತೆಗೆದು

ನನ್ನೊಮ್ಮೆ ಆವರಿಸು

ಈ ಬೇಗೆ ನೀ ಹರಿಸು

ಮನದಾಳದ ಉಲ್ಲಾಸದೀ

ಕುಂತಲ್ಲು ನೀನೆ ನಿಂತಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ಕಣ್ಣಲ್ಲು ನೀನೆ ಕನಸಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ನನ ನೆನ್ನೆಗಳು ನೀನೆ ನಾಳೆಗಳು ನೀನೆ

ಎಂದೆಂದು ನೀನೆ ಸಖಿ

ಆವರಿಸು ಮೈದುಂಬಿ

ಜಸ್ಟ್ ಮಾತ್ ಮಾತಲ್ಲಿ

ನನ್ನೆಲ್ಲಾ ಕನಸನ್ನು ನಿನದೆಂದು ನೀ ತಿಳಿದಿದ್ದೆ

ನೂರೆಂಟು ನೋವಲ್ಲು ನೀ ಬಂದು ಜೊತೆಯಿದ್ದೆ

ಕಾರ್ಮೋಡ ಕವಿದ ಮನಕೇ

ಹೊಸ ಬೆಳಕು ತಂದು ಸುರಿದೆ

ನಿನಗಾಗಿ ನಾನು ನನ್ನ

ಬದುಕೆಲ್ಲ ಮುಡಿಪು ಎಂದೆ

ಈಗೆಲ್ಲಿ ನೀ ಹೋದೆ

ಕನಿಕರಿಸಿ ನೀ ಬಾರೆ

ಎದೆಗೂಡಿನ ಉಸಿರು ನೀನೆ

ಬಾನಲ್ಲು ನೀನೆ ಭುವಿಯಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ನೋವಲ್ಲು ನೀನೆ ನಗುವಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ನನ ನೆನ್ನೆಗಳು ನೀನೆ ನಾಳೆಗಳು ನೀನೆ

ಎಂದೆಂದು ನೀನೆ ಸಖಿ

ಆವರಿಸು ಮೈದುಂಬಿ

ಜಸ್ಟ್ ಮಾತ್ ಮಾತಲ್ಲಿ

ನೀನಿಲ್ಲದೇ ಬಾಳೇ ಬರಡು

ನಿನಗಾಗೆ ನನ್ನ ಬದುಕೆ ಮುಡಿಪು

ನೀನಿಲ್ಲದ ಬದುಕೇ ನೀರು

ಕೊಲ್ಲು ನಲ್ಲ ಆಆಆ...

ತಂಪಲ್ಲು ನೀನೆ ಬಿಸಿಲಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ಹಸಿರಲ್ಲು ನೀನೆ ಉಸಿರಲ್ಲು ನೀನೆ

ಎಲ್ಲೆಲ್ಲು ನೀನೇ ಸಖಿ

ನನ ನೆನ್ನೆಗಳು ನೀನೆ ನಾಳೆಗಳು ನೀನೆ

ಎಂದೆಂದು ನೀನೆ ಸಖಿ

ಆವರಿಸು ಮೈದುಂಬಿ

ಜಸ್ಟ್ ಮಾತ್ ಮಾತಲ್ಲಿ

ಜಸ್ಟ್ ಮಾತ್ ಮಾತಲ್ಲಿ

ಚಿತ್ರ ನೋಡಿ